Your Vision for
a Better Future
Matters

ग्लोबल लीडरशिप समिट नए विचारों, कार्रवाई योग्य अवधारणाओं, नेतृत्व सिद्धांतों और हार्दिक प्रेरणा का मिश्रण है। यह आपके लिए आपके नेतृत्व में सुसज्जित और प्रेरित करने के लिए तैयार विश्व स्तरीय संकाय से नेतृत्व अंतर्दृष्टि के धन तक पहुंचने का अवसर है – चाहे आपका प्रभाव कहीं भी हो।

Select Your Summit

Summit
Date

Summit
Date

Summit
Date

Speakers

ಕ್ರೇಗ್ ಗ್ರೋಸ್ಚೆಲ್

ಸ್ಥಾಪಕರು ಮತ್ತು ಹಿರಿಯ ಸಭಾ ಪಾಲಕರು, ಲೈಫ್.ಚರ್ಚ್, ಅತ್ಯುತ್ತಮ-ಮಾರಾಟದ ಲೇಖಕರು

ಜೇಮ್ಸ್ ಕ್ಲಿಯರ್

ಸ್ಥಾಪಕರು, ಹ್ಯಾಬಿಟ್ಸ್ ಅಕಾಡೆಮಿ, ಅತ್ಯುತ್ತಮ-ಮಾರಾಟದ ಲೇಖಕರು

ಕ್ರಿಶ್ ಕಂದಯ್ಯ

ಸಾಮಾಜಿಕ ವಾಣಿಜ್ಯೋದ್ಯಮಿ ಬ್ರಾಡ್‌ಕಾಸ್ಟರ್, ಲೇಖಕರು ಮತ್ತು ಸ್ಪೀಕರ್ ಸಂಸ್ಥಾಪಕರು, ದಿ ಸ್ಯಾಂಚ್ಚುರಿ ಫೌಂಡೇಶನ್

ಕ್ರಿಸ್ ಮಾತೆಬುಲಾ

ಲೀಡ್ ಪಾಸ್ಟರ್, ಹೋಪ್ ರಿಸ್ಟೋರೇಶನ್ ಮಿನಿಸ್ಟ್ರೀಸ್, ಲೀಡರ್ ಶಿಪ್ ಕನ್ಸಲ್ಟೆಂಟ್, ಲೇಖಕलेखक

ಎರ್ವಿನ್ ಮ್ಯಾಕ್‌ಮಾನಸ್

ಪಾಸ್ಟರ್, ಲೇಖಕರು , ಸಾರ್ವಜನಿಕ ಭಾಷಣಕಾರರು

ಕರ್ನಲ್ ನವನೀತ್ ಚಾಬ್ರಾ

ಭಾರತೀಯ ಸೇನೆ; ದಕ್ಷಿಣ ಏಷ್ಯಾದ ಮಾಜಿ
ನಿರ್ದೇಶಕ, ಗಿದ್ಯೋನ್ಸ್
ಇಂಟರ್ನ್ಯಾಷನಲ್

ಆಂಡ್ರ್ಯೂ ಜಯಚಂದ್ರನ್

CA; ಶಿಕ್ಷಣ ತಜ್ಞ; ಶಿಕ್ಷಣ, ಕ್ಷೇತ್ರದಲ್ಲಿ 'ಸೂರತ್ ನಗರದ ಐಕಾನ್'

ಡಲ್ಲಾಸ್ ಜೆಂಕಿನ್ಸ್

ಸೃಷ್ಠಿಕರ್ತ, ನಿರ್ದೇಶಕ ಮತ್ತು ದಿ ಚೂಸನ್ ನ ಸಹ-ಬರಹಗಾರ

ಮೇಗನ್ ಮಾರ್ಷ್ಮನ್

ಭಾಷಣಗಾರ್ತಿ, ಲೇಖಕಿ ಪಾಸ್ಟರ್, ವಿಲೋ ಕ್ರೀಕ್ ಸಮುದಾಯ ಚರ್ಚ್

ಕ್ರೇಗ್ ಗ್ರೋಸ್ಚೆಲ್

ಸ್ಥಾಪಕರು ಮತ್ತು ಹಿರಿಯ ಸಭಾ ಪಾಲಕರು, ಲೈಫ್.ಚರ್ಚ್, ಅತ್ಯುತ್ತಮ-ಮಾರಾಟದ ಲೇಖಕರು

ನಾಯಕರ ನಾಯಕರಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಕ್ರೇಗ್ ಗ್ರೋಶೆಲ್ ಅವರು ಲೈಫ್ ಚರ್ಚ್ ನ ಸ್ಥಾಪಕ ಮತ್ತು ಹಿರಿಯ ಸಭಾ ಸೇವಕರಗಿದ್ದಾರೆ. ಇತ್ತೀಚಿನ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲು ಅವರ ಸುವಾರ್ತಿಕ ವಿಧಾನಕ್ಕೆ ಹೆಸರುವಾಸಿಯಾಗಿದೆ, ಲೈಫ್ ಚರ್ಚ್ 40 ಕ್ಯಾಂಪಸ್‌ಗಳಲ್ಲಿ ವಾರಕ್ಕೆ 85,000 ಕ್ಕೂ ಹೆಚ್ಚು ಜನರ ಹಾಜರಾತಿಯೊಂದಿಗೆ ಆನ್‌ಲೈನ್ ಮತ್ತು ವೈಯಕ್ತಿಕ ಸೇವೆಗಳನ್ನು ನಡೆಸುತ್ತಿದೆ. ವಿಶ್ವಾದ್ಯಂತ ಅರ್ಧ ಶತಕೋಟಿಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿರುವ ಯು ವರ್ಸನ್ (YouVersion) ಬೈಬಲ್ ಅಪ್ಲಿಕೇಶನ್‌ನ ನವೀನ ಸೃಷ್ಟಿಕರ್ತ, ಲೈಫ್ ಚರ್ಚ್ 2020 ರಲ್ಲಿ ಜಾಗತಿಕ ಆರೋಗ್ಯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವರ್ಚುವಲ್ ಅನುಭವಗಳನ್ನು ಸರಾಗಮಾಡಲು ಸಭೆಗಳಿಗೆ ಉಚಿತ ಪರಿಕರಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜಾಗತಿಕ ನಾಯಕತ್ವ ಶೃಂಗಸಭೆಯ ಪರವಾಗಿ , ಅವರು ಸಮಾಜದ ಪ್ರತಿಯೊಂದು ವಲಯದಲ್ಲಿ ನಾಯಕರನ್ನು ನಿರ್ಮಿಸಲು ಪ್ರತಿಪಾದಿಸುತ್ತಾರೆ. ಅವರು ನ್ಯೂಯಾರ್ಕ್ ಟೈಮ್ಸ್ ಉತ್ತಮ-ಮಾರಾಟದ ಲೇಖಕರು ಮತ್ತು ಉನ್ನತ ಶ್ರೇಣಿಯ ಕ್ರೇಗ್ ಗ್ರೋಶೆಲ್ ಲೀಡರ್‌ಶಿಪ್ ಪಾಡ್‌ಕ್ಯಾಸ್ಟ್‌ನ ಹೋಸ್ಟ್ ಸಹ ಆಗಿದ್ದಾರೆ.

ಜೇಮ್ಸ್ ಕ್ಲಿಯರ್

ಸ್ಥಾಪಕರು, ಹ್ಯಾಬಿಟ್ಸ್ ಅಕಾಡೆಮಿ, ಅತ್ಯುತ್ತಮ-ಮಾರಾಟದ ಲೇಖಕರು

ಜೇಮ್ಸ್ ಕ್ಲಿಯರ್ ಅಭ್ಯಾಸ ರಚನೆಯಲ್ಲಿ ವಿಶ್ವದ ಪ್ರಮುಖ ತಜ್ಞರಲ್ಲಿ ಒಬ್ಬರು. ಅವರ ನ್ಯೂಯಾರ್ಕ್ ಟೈಮ್ಸ್ ಅತ್ಯುತ್ತಮ-ಮಾರಾಟದ ಪುಸ್ತಕ, ಅಟಾಮಿಕ್ ಹ್ಯಾಬಿಟ್ಸ್ (ಪರಮಾಣು ಅಭ್ಯಾಸಗಳು), ವಿಶ್ವದಾದ್ಯಂತ 10 ಮಿಲಿಯನ್ ಪುಸ್ತಕ ಪ್ರತಿಗಳನ್ನು ಮಾರಾಟ ಮಾಡಿದೆ, 50 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ, ಅಮೆಜಾನ್‌ನಲ್ಲಿ 2021 ರ ಅತ್ಯುತ್ತಮ ಮಾರಾಟವಾದ ಪುಸ್ತಕವಾಗಿದೆ ಮತ್ತು ಆಡಿಬಲ್‌ನಲ್ಲಿ ನಂಬರ್ ಒನ್ ಆಡಿಯೊ ಬುಕ್ ಆಗಿದೆ. ಕ್ಲಿಯರ್ ಅವರ “3-2-1” ಇಮೇಲ್ ಸುದ್ದಿಪತ್ರವನ್ನು ದೈನಂದಿನ ಜೀವನ ಮತ್ತು ಕೆಲಸಕ್ಕೆ ಸುಲಭವಾಗಿ ಅನ್ವಯಿಸಬಹುದಾದ ಸರಳ ನಡವಳಿಕೆಗಳಲ್ಲಿ ಸಂಕೀರ್ಣ ವಿಷಯಗಳನ್ನು ಸರಳಗೊಳಿಸುವ ಅವರ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಪ್ರತಿ ವಾರ 1ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರಿಗೆ ಕಳುಹಿಸಲಾಗುತ್ತದೆ. ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಗೂಗಲ್ ಸೇರಿದಂತೆ ಅನೇಕ ಫಾರ್ಚೂನ್ 500 ಕಂಪನಿಗಳಲ್ಲಿ ಅವರು ತಮ್ಮ ಬೋಧನೆಗಳನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಿದ್ದಾರೆ. ಅವರ ಕೆಲಸವು ಟೈಮ್ಸ್, ದಿ ನ್ಯೂಯಾರ್ಕ್ ಟೈಮ್ಸ್, ದಿ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಸಿಬಿಎಸ್ ನಲ್ಲಿ ಈ ದಿನ ಕಾಣಿಸಿಕೊಂಡಿದೆ.

ಕ್ರಿಶ್ ಕಂದಯ್ಯ

ಸಾಮಾಜಿಕ ವಾಣಿಜ್ಯೋದ್ಯಮಿ ಬ್ರಾಡ್‌ಕಾಸ್ಟರ್, ಲೇಖಕರು ಮತ್ತು ಸ್ಪೀಕರ್ ಸಂಸ್ಥಾಪಕರು, ದಿ ಸ್ಯಾಂಚ್ಚುರಿ ಫೌಂಡೇಶನ್

ಡಾ. ಕ್ರಿಶ್ ಕಂದಯ್ಯ ಸಾಮಾಜಿಕ ಉದ್ಯಮಿಯಾಗಿದ್ದು, ನಾಗರಿಕ ಸಮಾಜ, ನಂಬಿಕೆಯ ಸಮುದಾಯಗಳು, ಸರ್ಕಾರ ಮತ್ತು ಪರೋಪಕಾರಗಳಲ್ಲಿ ಸಹಭಾಗಿತ್ವವನ್ನು ನಿರ್ಮಿಸುವ ಮೂಲಕ ಸಮಾಜದ ಕೆಲವೊಂದು ಕಷ್ಟಕರ ಸಮಸ್ಯೆಗಳನ್ನು ಪರಿಹರಿಸುವ ಕನಸು ಹೊಂದಿದ್ದಾರೆ. ಅವರು "ದಿ ಸ್ಯಾಂಕ್ಚುರಿ ಫೌಂಡೇಶನ್"ನ ಸ್ಥಾಪಕರಾಗಿದ್ದು, ಈ ಸಂಸ್ಥೆಯು ಯುಕೆಯಲ್ಲಿ ನಿರಾಶ್ರಿತರಿಗೆ ಸ್ವಾಗತ, ಉದ್ಯೋಗ ಮತ್ತು ತೃಪ್ತಿಕರ ಮನೆಗಳಿಗಾಗಿ ಬೆಂಬಲ ನೀಡುತ್ತದೆ. ಕೃಷ್ ನಿರಾಶ್ರಿತರ ಪುನರ್ವಸತಿ, ಮಕ್ಕಳ ಕಲ್ಯಾಣ ಸುಧಾರಣೆ, ಶೈಕ್ಷಣಿಕ ನಾವೀನ್ಯತೆ, ದಾನ ಮತ್ತು ನಾಗರಿಕ ಸಮಾಜದ ಸಂಚಲನ ಕ್ಷೇತ್ರಗಳಲ್ಲಿ ಪರಿಣಿತರಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು ಯುಕೆ ಸರ್ಕಾರದ ದತ್ತು ಮತ್ತು ವಿಶೇಷ ಆಶ್ರಯ ನೀಡುವ ಲೀಡರ್‌ಶಿಪ್ ಬೋರ್ಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇತ್ತೀಚೆಗೆ ಅವರು ಮಕ್ಕಳ ಸಹಾಯದ ವ್ಯವಸ್ಥೆಯಲ್ಲಿ ಶಾಶ್ವತ ಪ್ರೀತಿ ತುಂಬಿದ ಕುಟುಂಬಗಳನ್ನು ಹುಡುಕುವಲ್ಲಿ ತಂತ್ರಜ್ಞಾನಾಧಾರಿತ ನಾಯಕತ್ವವನ್ನು ನೀಡುತ್ತಿದ್ದಾರೆ. ಅವರು ಜನ್ಮ ಪೋಷಕರು, ಸಾಕು ಪೋಷಕರು, ದತ್ತು ಪಡೆದ ಪೋಷಕರು ಮತ್ತು ಜಾಗತಿಕವಾಗಿ ದುರ್ಬಲ ಮಕ್ಕಳಿಗಾಗಿ ಹೋರಾಡುವ ವಕೀಲರಾಗಿದ್ದಾರೆ.

ಕ್ರಿಸ್ ಮಾತೆಬುಲಾ

ಲೀಡ್ ಪಾಸ್ಟರ್, ಹೋಪ್ ರಿಸ್ಟೋರೇಶನ್ ಮಿನಿಸ್ಟ್ರೀಸ್, ಲೀಡರ್ ಶಿಪ್ ಕನ್ಸಲ್ಟೆಂಟ್, ಲೇಖಕ

ಪಾಸ್ಟರ್ ಕ್ರಿಸ್ ಮ್ಯಾಥೆಬುಲಾ ಅವರು ಹೋಪ್ ರೆಸ್ಟೋರೇಶನ್ ಮಿನಿಸ್ಟ್ರೀಸ್‌ನ ಹಿರಿಯ ಸಭಾ ಸೇವಕರು ಮತ್ತು ದರ್ಶನ ಹೊಂದಿದವರು. ಏಳು ಕ್ಯಾಂಪಸ್‌ಗಳನ್ನು ಹೊಂದಿರುವ ಸಮಕಾಲೀನ ಚರ್ಚ್‌ಗಳು ಗೌಟೆಂಗ್‌ನಾದ್ಯಂತ 20000 ಸದಸ್ಯರ ಸಭೆಗೆ ಸೇವೆ ಸಲ್ಲಿಸುತ್ತಿವೆ, ದಕ್ಷಿಣ ಆಫ್ರಿಕಾದ ಕೆಂಪ್ಟನ್ ಪಾರ್ಕ್‌ನ ಕ್ಲೋರ್‌ಕಾಪ್‌ನಲ್ಲಿ ಮುಖ್ಯ ಕ್ಯಾಂಪಸ್‌ನ್ನು ಹೊಂದಿದೆ. ಅವರು ಮಾನವೀಯತೆಯ ಸಂಘಟನೆಯಾದ ಪಿಪಲ್ ಮ್ಯಾಟರ್ಸ್ ಟು ಗಾಡ್ ಫೌಂಡೇಶನ್‌ನ ಮತ್ತು ಸಮರ್ಪಿತ ನಾಗರಿಕ ಚಳುವಳಿಯ ಸಂಸ್ಥಾಪಕರಾಗಿದ್ದಾರೆ. ಕ್ರಿಸ್ ಒಬ್ಬ ನಿಷ್ಟಾವಂತ ನಾಗರಿಕ, ಲೇಖಕ, ಅಂಕಣಕಾರ ಮತ್ತು ನಾಯಕತ್ವದ ಸಲಹೆಗಾರ. ಅವರ ಟಿವಿ ಕಾರ್ಯಕ್ರಮ, ಹೋಪ್ ಅಲೈವ್, ಫೇಥ್ ಟಿವಿ, ಒನ್ ಗಾಸ್ಪೆಲ್, ಟ್ರೇಸ್ ಗಾಸ್ಪೆಲ್ ಮತ್ತು ಇತರ ದೂರದರ್ಶನ ಮತ್ತು ರೇಡಿಯೋ ಸ್ಟೇಷನ್ ಗಳಲ್ಲಿ ಕ್ರಮವಾಗಿ ಪ್ರಸಾರವಾಗುತ್ತಿವೆ. ಅವರು ಒಂಬತ್ತು ಪುಸ್ತಕಗಳ ಲೇಖಕರಾಗಿದ್ದಾರೆ, ಇತ್ತೀಚಿಗೆ ಬಿಡುಗಡೆಯಾದ ಅವರ ಪುಸ್ತಕ "ಡೆವೋಟೆಡ್ ಸಿಟಿಜನ್".

ಎರ್ವಿನ್ ಮ್ಯಾಕ್‌ಮಾನಸ್

ಪಾಸ್ಟರ್, ಲೇಖಕರು , ಸಾರ್ವಜನಿಕ ಭಾಷಣಕಾರರು

ಎರ್ವಿನ್ ರಾಫೆಲ್ ಮ್ಯಾಕ್‌ಮಾನಸ್ ಒಬ್ಬ ಮೈಂಡ್ ಆರ್ಕಿಟೆಕ್ಟ್ ಮತ್ತು ಪ್ರಶಸ್ತಿ ವಿಜೇತ ಲೇಖಕ ಮತ್ತು ಕಲಾವಿದ. ಅವರ ಪುಸ್ತಕಗಳು ಒಂದು ದಶಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಮತ್ತು ಹನ್ನೆರಡು ಭಾಷೆಗಳಿಗೆ ಅನುವಾದಗೊಂಡಿವೆ. ಮೈಂಡ್ ಆರ್ಕಿಟೆಕ್ಟ್ ಆಗಿ, ಮೆಕ್‌ಮ್ಯಾನಸ್ ಕಳೆದ 30 ವರ್ಷಗಳಿಂದ ಸಿಇಒಗಳು, ವೃತ್ತಿಪರ ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಬಿಲಿಯನ್-ಡಾಲರ್ ಕಂಪನಿಗಳು, ವಿಶ್ವವಿದ್ಯಾನಿಲಯಗಳು ಮತ್ತು ವಿಶ್ವ ನಾಯಕರಿಗೆ ಸಲಹೆ ಮತ್ತು ತರಬೇತಿ ನೀಡುತ್ತಿದ್ದಾರೆ ಮತ್ತು ಜನರು ತಮ್ಮ ಆಂತರಿಕ ಇತಿಮಿತಿಗಳಿಂದ ಹೊರಬರಲು ಮತ್ತು ಅವರ ವೈಯಕ್ತಿಕ ಪ್ರತಿಭೆಯನ್ನು ಅನ್‌ಲಾಕ್ ಮಾಡಲು ಸಹಾಯ ಮಾಡುವಲ್ಲಿ ಉತ್ಸುಕರಾಗಿದ್ದಾರೆ. ಅವರ ಹೊಸ ಬಹು ನಿರೀಕ್ಷಿತ ಪುಸ್ತಕ, ಮೈಂಡ್ ಶಿಫ್ಟ್: ಇಟ್ ಡಸ್ ನಾಟ್ ಟೇಕ್ ಎ ಜೀನಿಯಸ್ ಟು ಥಿಂಕ್ ಒನ್, ಅಕ್ಟೋಬರ್ 2023 ರಲ್ಲಿ ಬಿಡುಗಡೆಯಾದೆ.

ಕರ್ನಲ್ ನವನೀತ್ ಚಾಬ್ರಾ

ಭಾರತೀಯ ಸೇನೆ; ದಕ್ಷಿಣ ಏಷ್ಯಾದ ಮಾಜಿ
ನಿರ್ದೇಶಕ, ಗಿದ್ಯೋನ್ಸ್
ಇಂಟರ್ನ್ಯಾಷನಲ್

ಕರ್ನಲ್ (ನಿವೃತ್ತ) ನವನೀತ್ ಛಾಬ್ರಾ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಖಡಕ್ವಾಸ್ಲಾ, ಪುಣೆ, ಭಾರತದ ಹಳೆಯ ವಿದ್ಯಾರ್ಥಿ. ಅವರು 1987 ರಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ಅವರು ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

"ಕ್ಯಾಪ್ಟನ್ ಆಗಿದ್ದಾಗ, ಅವರು ಆಂಟಿ-ಟ್ಯಾಂಕ್ ಮಿಸೈಲ್ ಗುಂಪಿನಲ್ಲಿ ಶಿಕ್ಷಕರಾಗಿದ್ದರು. ಮೇಜರ್ ಆಗಿದ್ದಾಗ, ಅವರು ರಾಷ್ಟ್ರೀಯ ಭದ್ರತಾ ಗಾರ್ಡ್ (ಎನ್‌ಎಸ್‌ಜಿ) ಎಂಬ ಎಲೈಟ್ ವಿಶೇಷ ಬಲದ ಭಾಗವಾಗಿ ಎರಡುವರೆ ವರ್ಷ ಸೇವೆ ಸಲ್ಲಿಸಿದರು. ಕರ್ನಲ್ ಆಗಿದ್ದಾಗ, ಅವರು ಕಾಶ್ಮೀರ ಕಣಿವೆಯ ಉರಿಯ ನಿಯಂತ್ರಣ ರೇಖೆಯಲ್ಲಿ ಹತ್ತೊಂಬತ್ತು ಅಧಿಕಾರಿಗಳು ಮತ್ತು ಒಂಬೈ ನೂರು ಸೈನಿಕರೊಂದಿಗೆ 14 ರಜಪೂತ್ ಅವರ ಸ್ವಂತ ಬೆಟಾಲಿಯನ್‌ಗೆ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದಾರೆ."

ಸೈನ್ಯದಲ್ಲಿ ಅವರ ಅಧಿಕಾರಾವಧಿಯು ಅವರನ್ನು ಯುದ್ಧತಂತ್ರದ ಮತ್ತು ಕಾರ್ಯಾಚರಣೆಯ ಮಟ್ಟದಲ್ಲಿ ನಾಯಕರಾಗಿ ಬೆಳೆಸಿತು. ನಾಯಕತ್ವದ ಮೂಲ ತತ್ವಗಳು ಅವರಲ್ಲಿ ನೆಲೆಗೊಂಡಿವೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ, ಅವರು ಮೂರು ಬಾರಿ ಶೌರ್ಯಕ್ಕಾಗಿ ಮತ್ತು ಎರಡು ಬಾರಿ ವಿಶಿಷ್ಟ ಸೇವೆ ಸಲ್ಲಿಸುವುದಕ್ಕಾಗಿ ಪ್ರಶಸ್ತಿಯನ್ನು ಪಡೆದರು.

ಕರ್ನಲ್ ನವನೀತ್ ಅವರು ಭಾರತೀಯ ಸೇನೆಯಿಂದ ಪ್ರಬುದ್ಧ ನಿವೃತ್ತಿಯನ್ನು ಪಡೆದರು ಮತ್ತು ಭಾರತದಲ್ಲಿ ದಿ ಗಿಡಿಯನ್ಸ್ ಇಂಟರ್‌ನ್ಯಾಶನಲ್‌ಗೆ ಅದರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇರಿದರು. ಅವರು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಲಾಭದಾಯಕವಲ್ಲದ(Non Profit) ಸಂಸ್ಥೆಯಲ್ಲಿ ಬಳಸಲು ಬಯಸಿದ್ದರು. ಅವರು ಹದಿಮೂರು ವರ್ಷಗಳ ಕಾಲ ಭಾರತದಲ್ಲಿ ಗಿಡಿಯನ್ಸ್ ಇಂಟರ್‌ನ್ಯಾಶನಲ್‌ಗೆ ಸೇವೆ ಸಲ್ಲಿಸಿದರು ಮತ್ತು ಭಾರತದಲ್ಲಿ ದಿ ಗಿಡಿಯನ್ಸ್ ಇಂಟರ್‌ನ್ಯಾಶನಲ್ ತನ್ನ ಹದಿಮೂರು ವರ್ಷಗಳಲ್ಲಿ ಅನೇಕ ಪಟ್ಟು ಬೆಳವಣಿಗೆಯನ್ನು ದಾಖಲಿಸಿತು. 2019 ರಿಂದ 2022 ರವರೆಗೆ ನವನೀತ್ ಚೀನಾ ಸೇರಿದಂತೆ 36 ದೇಶಗಳನ್ನು ಒಳಗೊಂಡಿರುವ ಏಷ್ಯಾ ಮತ್ತು ಪ್ಯಾಸಿಫಿಕ್ ಪ್ರದೇಶವನ್ನು ದಿ ಗಿಡಿಯನ್ಸ್ ಇಂಟರ್ನ್ಯಾಷನಲ್ (USA) ಗಾಗಿ ಅಂತರರಾಷ್ಟ್ರೀಯ ನಿರ್ದೇಶಕರಾಗಿಯೂ ಸಹ ಸೇವೆ ಸಲ್ಲಿಸಿದರು.

ಪ್ರಸ್ತುತ, ಅವರು ಡಲ್ಲಾಸ್ ಥಿಯೋಲಾಜಿಕಲ್ ಸೆಮಿನರಿಯಿಂದ ಥಿಯಾಲಜಿಯಲ್ಲಿ ಮಾಸ್ಟರ್ಸ್ ಅನ್ನು ಓದುತ್ತಿದ್ದಾರೆ ಮತ್ತು ಮೂರು ಲಾಭರಹಿತ(Non Profit) ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಂಡ್ರ್ಯೂ ಜಯಚಂದ್ರನ್

CA; ಶಿಕ್ಷಣ ತಜ್ಞ; ಶಿಕ್ಷಣ ಕ್ಷೇತ್ರದಲ್ಲಿ 'ಸೂರತ್ ನಗರದ ಐಕಾನ್'

ಆಂಡ್ರ್ಯೂ ಜಯಚಂದ್ರ ನಾಡಾರ್ ಅವರು ಪದದ ಪ್ರತಿ ಅರ್ಥದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತಾರೆ. ಶಿಕ್ಷಣತಜ್ಞರಲ್ಲದೆ, ಅವರು ಲೇಖಕರು, ಚಾರ್ಟರ್ಡ್ ಅಕೌಂಟೆಂಟ್, ಸಂಶೋಧಕರು ಮತ್ತು ಸಾರ್ವಜನಿಕ ಭಾಷಣಕಾರರು, ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಿದ್ದಾರೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಸೂರತ್‌ನ ಪ್ರಮುಖ ಶಿಕ್ಷಣ ಸಂಸ್ಥೆಯೊಂದರ ನಿರ್ದೇಶಕರಾಗಿ, ಅವರು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಬದಲಾವಣೆ ತರುತ್ತಿದ್ದಾರೆ.

ಆಂಡ್ರ್ಯೂ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ 'ಐಕಾನ್ ಆಫ್ ಸೂರತ್' ಎಂಬ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಶಿಕ್ಷಣ ಮತ್ತು ವ್ಯವಹಾರದಲ್ಲಿನ ಅವರ ನಂಬಲಾಗದ ಕೆಲಸಕ್ಕಾಗಿ ಟೈಮ್ಸ್ ಆಫ್ ಇಂಡಿಯಾದಿಂದ '40 ವರ್ಷದೊಳಗಿನ 40 ಉದ್ಯಮಿಗಳಲ್ಲಿ' ಒಬ್ಬರಾಗಿ ಆಯ್ಕೆಯಾದವರು.

ಆಂಡ್ರ್ಯೂ ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ, ಹಲವಾರು ಕಾರ್ಯಕ್ರಮಗಳಲ್ಲಿ ತೀರ್ಪುಗಾರರ ಸದಸ್ಯರಾಗಿ ಮತ್ತು ಪ್ಯಾನಲಿಸ್ಟ್ ಆಗಿ ಮತ್ತು ನಿಯಮಿತವಾಗಿ ಮಾಸ ಪತ್ರಿಕೆಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿ ಕೊಡುಗೆ ನೀಡುತ್ತಲಿದ್ದಾರೆ . ಪ್ರಸ್ತುತವಾಗಿ, ಅವರು ಸೂರತ್‌ನ ವೈಎಂಸಿಎ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಡಲ್ಲಾಸ್ ಜೆಂಕಿನ್ಸ್

ಸೃಷ್ಠಿಕರ್ತ, ನಿರ್ದೇಶಕ ಮತ್ತು ದಿ ಚೂಸನ್ ನ ಸಹ-ಬರಹಗಾರ

25 ವರ್ಷ ವಯಸ್ಸಿನಲ್ಲಿ, ಡಲ್ಲಾಸ್ ಜೆನ್ಕಿನ್ಸ್ ವಾರ್ನರ್ ಬ್ರದರ್ಸ್ ಮೂಲಕ ವಿತರಿತವಾದ "ಹೋಮ್‌ಟೌನ್ ಲೆಜೆಂಡ್" ಎಂಬ ಸ್ವತಂತ್ರ ಚಿತ್ರವನ್ನು ನಿರ್ಮಿಸಿದರು. ಕಳೆದ 20 ವರ್ಷಗಳಲ್ಲಿ, ಅವರು ಯುನಿವರ್ಸಲ್, ಲಯನ್ಸ್‌ಗೇಟ್, ಪ್ಯೂರಿಫ್ಲಿಕ್ಸ್, ಹಾಲ್‌ಮಾರ್ಕ್ ಚಾನೆಲ್ ಮತ್ತು ಅಮೆಜಾನ್‌ಗಾಗಿ ಹದಿನೈದುಕ್ಕೂ ಹೆಚ್ಚು ವೈಶಿಷ್ಟ್ಯ ಮತ್ತು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ನಿರ್ಮಾಪಕರಾಗಿದ್ದಾರೆ. ಈಗ ಅವರು ಯೇಸುವಿನ ಜೀವನದ ಬಗ್ಗೆ "ದಿ ಚೋಸೆನ್" ಎಂಬ ಬೃಹತ್ ಕ್ರೌಡ್ ಫಂಡಿಂಗ್ ಮೀಡಿಯಾ ಯೋಜನೆಗೆ ಬರೆಯುತ್ತಿದ್ದಾರೆ, ನಿರ್ದೇಶಿಸುತ್ತಿದ್ದಾರೆ ಮತ್ತು ನಿರ್ಮಾಪಕರಾಗಿದ್ದಾರೆ. ಜಾಗತಿಕವಾಗಿ ಸದ್ದು ಮಾಡಿದ "ದಿ ಚೋಸೆನ್" ಸರಣಿ (ಸೀಸನ್), ಇತಿಹಾಸದಲ್ಲೇ ಅತಿದೊಡ್ಡ ಅಭಿಮಾನಿ ಬೆಂಬಲಿತ ಮನರಂಜನಾ ಯೋಜನೆ ಆಗಿದ್ದು, ವಿಶ್ವಾದ್ಯಾಂತ 520 ದಶಲಕ್ಷಕ್ಕೂ ಹೆಚ್ಚು ಎಪಿಸೋಡ್ ವೀಕ್ಷಣೆಗಳನ್ನು ಗಳಿಸಿದೆ. ಇದು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಮತ್ತು ಪೀಕಾಕ್‌ನಂತಹ ಮುಂತಾದ ಪ್ರಮುಖ ಸ್ಟ್ರೀಮಿಂಗ್ ಸೇವೆಗಳಲ್ಲಿಯೂ ಲಭ್ಯವಿದೆ, ಹಾಗೆಯೇ ಎಲ್ಲಾ ಸರಣಿಗಳು "ದಿ ಚೋಸೆನ್" ಮೊಬೈಲ್ ಮತ್ತು ಟಿವಿ ಆ್ಯಪ್ಗಳಲ್ಲಿ ಉಚಿತವಾಗಿ ಲಭ್ಯವಿದೆ. ಇದನ್ನು 50ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಿಸಲಾಗಿದೆ ಮತ್ತು ವಿಶೇಷ ಕಾರ್ಯಕ್ರಮ ಪ್ರದರ್ಶನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ $35 ದಶಲಕ್ಷಕ್ಕೂ ಹೆಚ್ಚು ಹಣ ಗಳಿಸಿದೆ (ವೀಕ್ಷಕರು ಕೆಲ ವಾರಗಳಲ್ಲಿ ಉಚಿತವಾಗಿ ಸ್ಟ್ರೀಮ್ ಆಗಲಿದೆ ಎಂಬುದನ್ನು ತಿಳಿದಿದ್ದರೂ ಸಹ ಚಿತ್ರ ಮಂದಿರಗಳಲ್ಲಿ ವೀಕ್ಷಿಸಿದ್ದಾರೆ).

ಮೇಗನ್ ಮಾರ್ಷ್ಮನ್

ಭಾಷಣಗಾರ್ತಿ, ಲೇಖಕಿ ಪಾಸ್ಟರ್, ವಿಲೋ ಕ್ರೀಕ್ ಸಮುದಾಯ ಚರ್ಚ್

ಚರ್ಚುಗಳು, ಸಮ್ಮೇಳನಗಳು ಮತ್ತು ವಿಶ್ವವಿದ್ಯಾನಿಲಯ ಪ್ರಾರ್ಥನಾ ಮಂದಿರಗಳಲ್ಲಿ ಅಂತರರಾಷ್ಟ್ರೀಯ ಭಾಷಣಕಾರರಾಗಿ, ಮೇಗನ್ ಫೇಟ್ ಮಾರ್ಷ್ಮನ್ ಈ ಪೀಳಿಗೆಗೆ ಪ್ರಮುಖ ಧ್ವನಿಯಾಗಿದ್ದಾರೆ. ವಿಲೋ ಕ್ರೀಕ್ ಸಮುದಾಯ ಚರ್ಚ್‌ನಲ್ಲಿ ಬೋಧಕ ಸೇವಕಿಯಾಗಿ ಮತ್ತು ಹ್ಯೂಮ್ ಲೇಕ್ ಕ್ರಿಶ್ಚಿಯನ್ ಕ್ಯಾಂಪ್‌ಗಳಲ್ಲಿ ಮಹಿಳಾ ಸೇವೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವಾಗ ಅವರು ಪ್ರಸ್ತುತವಾಗಿ ಡಾಕ್ಟರೇಟ್ ಇನ್ ಮಿಣಿಸ್ಟ್ರಿ ಅನ್ನು ಪೂರ್ಣಗೊಳಿಸುತ್ತಿದ್ದಾರೆ.

ಲಾಂಗ್ ಬೀಚ್, ಅರ್ಬರ್ ರಸ್ತೆಯಲ್ಲಿರುವ, ಕ್ಯಾಲಿಫೋರ್ನಿಯಾದಲ್ಲಿರುವ ತನ್ನ ಮನೆಯ ಸಭೆಯಲ್ಲಿರುವ ಮಹಿಳೆಯರಿಗೆ ಕುರುಬಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇಗನ್ ಇತ್ತೀಚೆಗೆ ಬ್ಯೂಟಿಫುಲ್ ವರ್ಡ್ ಬೈಬಲ್ ಅಧ್ಯಯನವನ್ನು ಬಿಡುಗಡೆ ಮಾಡಿದರು: ಜಾನ್ (2022, ಹಾರ್ಪರ್ ಕಾಲಿನ್ಸ್), ಪುಸ್ತಕ ಮತ್ತು ಬೈಬಲ್ ಅಧ್ಯಯನ ಮೀಂಟ್ ಫಾರ್ ಗುಡ್ (2020, ಝೋಂಡರ್ವಾನ್), ಸೆಲ್ಫ್ ಲೆಸ್ (2017, ಡೇವಿಡ್ ಸಿ ಕುಕ್) ಅನ್ನು ಬರೆದಿದ್ದಾರೆ ಮತ್ತು 7 ಕುಟುಂಬ ಸೇವೆಗಳ ಅಗತ್ಯತೆಗಳು ಎಂಬ ಪುಸ್ತಕವನ್ನು ಡಾ. ಮಿಚೆಲ್ ಆಂಥೋನಿ (2015, ಡೇವಿಡ್ ಸಿ ಕುಕ್) ಅವರೊಂದಿಗೆ ಸೇರಿ ಬರೆದಿದ್ದಾರೆ.

Hindi Digital Summit

28th & 29th March 2023 | 7:00pm to 8:30pm