ಜಾಗತಿಕ ನಾಯಕತ್ವ ಶೃಂಗಸಭೆಯು, ಹೊಸ ಆಲೋಚನೆಗಳು, ಕ್ರಿಯಾತ್ಮಕ ಪರಿಕಲ್ಪನೆಗಳು, ನಾಯಕತ್ವದ ತತ್ವಗಳು ಮತ್ತು ಕಾರ್ಯಸಾಧಿಸಬಹುದಾದ ಸ್ಫೂರ್ತಿಯ ಮಿಶ್ರಣವಾಗಿದೆ. ನಿಮ್ಮ ನಾಯಕತ್ವದಲ್ಲಿ ನಿಮ್ಮನ್ನು ಸಜ್ಜುಗೊಳಿಸಲು ಮತ್ತು ಪ್ರೇರೇಪಿಸಲು ಸಿದ್ಧವಾಗಿರುವ ವಿಶ್ವ ದರ್ಜೆಯ ಬೋಧಕರ ನಾಯಕತ್ವದ ಪರಿಜ್ಞಾನದೊಳಗೆ ಪ್ರವೇಶಿಸಲು ಇದು ನಿಮಗಿರುವ ಸದವಕಾಶವಾಗಿದೆ – ನಿಮಗೆ ಯಾವ ಕೇತ್ರದಲ್ಲಿ ಪ್ರಭಾವ ಇದ್ದರೂ ಸರಿಯೇ.
ಕ್ರೇಗ್ ಗ್ರೋಶೆಲ್ ಲೈಫ್.ಚರ್ಚ್ನ ಹಿರಿಯ ಸಭಾಪಾಲಕರು, ಈ ಸಭೆಯು ಅಮೆರಿಕದಲ್ಲಿ ಮತ್ತು ವಿಶ್ವದ ಬಹು-ಸ್ಥಳಗಳಲ್ಲಿ ಆನ್ಲೈನ್ನಲ್ಲಿ ಕೂಡಿ ಬರುವ ಒಂದು ನವೀನ ಸಭೆ. ಸೇವಾಧ್ಯೇಯಗಳಿಗಾಗಿ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಭೆಯೆಂದು ಹೆಸರುವಾಸಿಯಾಗಿದೆ. ಪ್ರತಿ ದೇಶದಲ್ಲಿ ಡೌನ್ಲೋಡ್ ಮಾಡಿಕೊಳ್ಳಲಾಗುವ YouVersion ಎಂಬ ಬೈಬಲ್ ಆಪ್ನ ಸೃಷ್ಟಿಕರ್ತ ಈ ಸಭೆಯೇ ಆಗಿದೆ.
2015 ರಲ್ಲಿ, ಮೈಕಲ್ ಟಾಡ್ ಮತ್ತು ಅವರ ಪತ್ನಿ ನಟಾಲಿಯಾ ಅವರಿಗೆ ಟ್ರಾನ್ಸ್ಫರ್ಮೇಷನ್ ಸಭೆಯ ನಾಯಕತ್ವವನ್ನು ವಹಿಸಲಾಯಿತು. ಸುವಾರ್ತೆಯೊಂದಿಗೆ ತಮ್ಮ ಸಮುದಾಯ, ನಗರ ಮತ್ತು ಪ್ರಪಂಚವನ್ನು ಸಂಬಂಧಿತ ಮತ್ತು ಪ್ರಗತಿಪರ ರೀತಿಯಲ್ಲಿ ತಲುಪುವ ದೃಷ್ಟಿಯಿಂದ, ಅವರು ಅತಿ ವೇಗವಾಗಿ ಬೆಳೆದಿದ್ದಾರೆ. ಪ್ರತಿ ವಾರ, ಅವರ ಸಭೆಗೆ ಸುಮಾರು 25,೦೦೦ ಕ್ಕೂ ಹೆಚ್ಚು ಪಾಲ್ಗೊಳ್ಳುವ ಜನರಿಗೆ ನೇರ ಮತ್ತು ಆನ್ಲೈನ್ನಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಟಾಡ್ನ ಪ್ರಭಾವವು ಸಭೆಯ ಗೋಡೆಗಳನ್ನು ಮೀರಿ ಸಾಮಾಜಿಕ ಮಾಧ್ಯಮದಲ್ಲು ವೈರಲ್ ವಿಸ್ತರಣೆಯೊಂದಿಗೆ ತಲುಪುತ್ತಿದೆ, ಇವರ ಐದು ಮುಖ್ಯ YouTube ನಲ್ಲಿ ಹಾಕಿರುವ ಮಾತುಗಳು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಸೇರಿವೆ. ಟಾಡ್ ತನ್ನ ಮೊದಲ ಪುಸ್ತಕವಾದ Relationship Goals ನ್ನು ಏಪ್ರಿಲ್ ತಿಂಗಳು 2020 ರಲ್ಲಿ ಬಿಡುಗಡೆ ಮಾಡಿದ್ದಾರೆ.
ತನ್ನ ಬರವಣಿಗೆ ಮತ್ತು ಬೋಧನೆಯ ಮೂಲಕ ಲಕ್ಷಾಂತರ ಜನರನ್ನು ತಲುಪಿದ ಲೈಸಾ ಟೆರ್ಕರ್ಸ್ಟ್ "Proverbs 31 Ministries" ಸೇವೆಯ ಅಧ್ಯಕ್ಷೆ ಮತ್ತು "COMPEL Writers Training" ತರಬೇತಿಯ ಸ್ಥಾಪಕಿ.
ಟೆರ್ಕರ್ಸ್ಟ್ ಅನೇಕ ಪಬ್ಲಿಕೇಷನ್ಸ್ ನಲ್ಲಿ ಪ್ರಕಟವಾಗಿದ್ದಾರೆ. ಇವರು ಫಾಕ್ಸ್ ನ್ಯೂಸ್, ಓಪ್ರಾ ಮತ್ತು ದಿ ಟುಡೆ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ಅವರಿಗೆ ಚಾಂಪಿಯನ್ಸ್ ಆಫ್ ಫೇಯ್ತ್ ಲೇಖಕ ಎಂಬ ಪ್ರಶಸ್ತಿ ಕೂಡಾ ನೀಡಲಾಗಿದೆ.
20 ಕ್ಕೂ ಹೆಚ್ಚು ಪುಸ್ತಕಗಳ ಲೇಖಕಿಯಾಗಿದ್ದು, ಅತಿ ಹೆಚ್ಚು ಮಾರಾಟವಾದ ಅವರ ಇತ್ತೀಚಿನ ಪುಸ್ತಕವೆಂದರೆ, "ಇದು ಈ ರೀತಿ ಇರಬಾರದು ಎಂದು ಭಾವಿಸಲಾಗಿದೆ: ನಿರಾಶೆಗಳು ನಿಮ್ಮನ್ನು ಚೂರುಚೂರು ಮಾಡಿದಾಗ ಅನಿರೀಕ್ಷಿತ ಶಕ್ತಿಯನ್ನು ಕಂಡುಹಿಡಿಯುವುದು ಹೇಗೆ ಎಂಬುವದಾಗಿದೆ."
ಗ್ಯಾರಿ ಹಾಗೆನ್: ಹಿಂಸಾಚಾರ, ಶೋಷಣೆ, ಗುಲಾಮಗಿರಿ ಮತ್ತು ದಬ್ಬಾಳಿಕೆಯ ಸಂತ್ರಸ್ತರನ್ನು ರಕ್ಷಿಸುವ ವಿಶ್ವಾದ್ಯಂತ ಏಜೆನ್ಸಿಯಾದ ಇಂಟರ್ನ್ಯಾಷನಲ್ ಜಸ್ಟೀಸ್ ಮಿಷನ್ (IJM)ಗೆ ಗ್ಯಾರಿ ಹಾಗೆನ್ ನೇತೃತ್ವ ವಹಿಸಿದ್ದಾರೆ. ಯು.ಎಸ್. ಸ್ಟೇಟ್ ಡಿಪಾರ್ಟ್ಮೆಂಟ್ ವ್ಯಕ್ತಿಗಳ ಕಳ್ಳಸಾಗಣೆ ನಿಷೇಧಕ್ಕಾಗಿ ಹೋರಾಡಿದ "ಹೀರೋ" ಎಂದು ಗುರುತಿಸಲ್ಪಟ್ಟು, ಗುಲಾಮಗಿರಿ ವಿರೋಧಿಸಿದ್ದಕ್ಕಾಗಿ ಅಮೇರಿಕಾ ಸರ್ಕಾರ ನೀಡಿದ ಅತ್ಯುನ್ನತ ನಾಯಕತ್ವ ಗೌರವ ಪ್ರಶಸ್ತಿಯನ್ನು ಪಡೆದಿದ್ದಾರೆ.
ಡಾ. ಚಮೊರೊ-ಪ್ರೇಮುಜಿಕ್ ಮಾನಸಿಕ ಪ್ರೊಫೈಲಿಂಗ್, ಪ್ರತಿಭೆ ನಿರ್ವಹಣೆ ಮತ್ತು ನಾಯಕತ್ವ ಅಭಿವೃದ್ಧಿಯಲ್ಲಿ ಪರಿಣಿತರು. ಅವರು ಮ್ಯಾನ್ಪವರ್ ಗ್ರೂಪ್ನ ಮುಖ್ಯ ಪ್ರತಿಭಾ ವಿಜ್ಞಾನಿ, ಡೀಪರ್ ಸಿಗ್ನಲ್ಸ್ ಮತ್ತು ಮೆಟಾ ಪ್ರೊಫೈಲಿಂಗ್ನ ಸಹ-ಸಂಸ್ಥಾಪಕ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಬಿಸಿನೆಸ್ ಸೈಕಾಲಜಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಜೆಪಿ ಮೋರ್ಗಾನ್, ಗೋಲ್ಡ್ಮನ್ ಸ್ಯಾಚ್ಸ್, ಗೂಗಲ್, ಬಿಬಿಸಿ ಮತ್ತು ಪಿ & ಜಿ ಸೇರಿದಂತೆ ಇನ್ನೂ ಅನೇಕ ಕಂಪನಿಗಳಿಗೆ ಸಮಾಲೋಚನೆಯನ್ನು ನೀಡುತ್ತಾ ಬರುತ್ತಿದ್ದಾರೆ. 10 ಪುಸ್ತಕಗಳು ಮತ್ತು 150 ಕ್ಕೂ ಹೆಚ್ಚು ವೈಜ್ಞಾನಿಕ ಪತ್ರಿಕೆಗಳನ್ನು ಬರೆದಿರುವ ಅವರು, ಅವರ ಪೀಳಿಗೆಯ ಅತ್ಯಂತ ಸಮೃದ್ಧ ಸಾಮಾಜಿಕ ವಿಜ್ಞಾನಿಗಳಲ್ಲಿ ಒಬ್ಬರು.
2012 ರಲ್ಲಿ ಫೆಲೋಶಿಪ್ ಸಭೆಯನ್ನು ಸ್ಥಾಪಿಸುವ ಮೊದಲು, ಟೇಟ್ ಅವರು ಕಾರ್ಯತಂತ್ರದ ಮತ್ತು ಗ್ರಾಮೀಣ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದರು. ಇದು ಅಮೇರಿಕಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಹು ಜನಾಂಗೀಯ ಸಭೆಗಲ್ಲಿ ಒಂದಾಗಿದೆ.
ಅವರು ಅಜುಸಾ ಪೆಸಿಫಿಕ್ ವಿಶ್ವವಿದ್ಯಾಲಯ, ಫುಲ್ಲರ್ ಯೂತ್ ಇನ್ಸ್ಟಿಟ್ಯೂಟ್ನ ಸಲಹಾ ಮಂಡಳಿ ಮತ್ತು ಜಾಗತಿಕ ನಾಯಕತ್ವ ಜಾಲ ಸೇರಿದಂತೆ ಅನೇಕ ಸಂಸ್ಥೆಗಳ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಕ್ರಿಯಾತ್ಮಕ ಸಂವಹನಕಾರ ಮತ್ತು ಬೇಡಿಕೆಯ ಸ್ಪೀಕರ್, ಇವರು ಸತ್ಯವೇದದ ಸವಾಲನ್ನು ಹಾಸ್ಯದೊಂದಿಗೆ ಸಂಯೋಜಿಸುತ್ತಾರೆ.
ತನ್ನ ಬರವಣಿಗೆ ಮತ್ತು ಬೋಧನೆಯ ಮೂಲಕ ಲಕ್ಷಾಂತರ ಜನರನ್ನು ತಲುಪಿದ ಲೈಸಾ ಟೆರ್ಕರ್ಸ್ಟ್ "Proverbs 31 Ministries" ಸೇವೆಯ ಅಧ್ಯಕ್ಷೆ ಮತ್ತು "COMPEL Writers Training" ತರಬೇತಿಯ ಸ್ಥಾಪಕಿ.
ಟೆರ್ಕರ್ಸ್ಟ್ ಅನೇಕ ಪಬ್ಲಿಕೇಷನ್ಸ್ ನಲ್ಲಿ ಪ್ರಕಟವಾಗಿದ್ದಾರೆ. ಇವರು ಫಾಕ್ಸ್ ನ್ಯೂಸ್, ಓಪ್ರಾ ಮತ್ತು ದಿ ಟುಡೆ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ಅವರಿಗೆ ಚಾಂಪಿಯನ್ಸ್ ಆಫ್ ಫೇಯ್ತ್ ಲೇಖಕ ಎಂಬ ಪ್ರಶಸ್ತಿ ಕೂಡಾ ನೀಡಲಾಗಿದೆ.
20 ಕ್ಕೂ ಹೆಚ್ಚು ಪುಸ್ತಕಗಳ ಲೇಖಕಿಯಾಗಿದ್ದು, ಅತಿ ಹೆಚ್ಚು ಮಾರಾಟವಾದ ಅವರ ಇತ್ತೀಚಿನ ಪುಸ್ತಕವೆಂದರೆ, "ಇದು ಈ ರೀತಿ ಇರಬಾರದು ಎಂದು ಭಾವಿಸಲಾಗಿದೆ: ನಿರಾಶೆಗಳು ನಿಮ್ಮನ್ನು ಚೂರುಚೂರು ಮಾಡಿದಾಗ ಅನಿರೀಕ್ಷಿತ ಶಕ್ತಿಯನ್ನು ಕಂಡುಹಿಡಿಯುವುದು ಹೇಗೆ ಎಂಬುವದಾಗಿದೆ."
ನಿಮ್ಮನ್ನು ಮತ್ತು ನಿಮ್ಮ ತಂಡವನ್ನು ಬೆಳೆಸಲು ಮತ್ತು ನಾಯಕತ್ವವನ್ನು ನಿಯಂತ್ರಿಸಲು ಪ್ರತಿ ತಿಂಗಳು ನಾಯಕತ್ವ ಅಧ್ಯಯನಗಳನ್ನು ಉಚಿತವಾಗಿ ವೀಕ್ಷಿಸಿ ಕಲಿತುಕೊಳ್ಳಬಹುದು.